Breaking News

IPL 2020 : RCB Vs MI ಆರ್‌ಸಿಬಿ ವಿರುದ್ಧ ಜಯಭೇರಿ ಬಾರಿಸಿದ ಮುಂಬೈ ಇಂಡಿಯನ್ಸ್

IPL 2020 : ಆರ್‌ಸಿಬಿ ವಿರುದ್ಧ ಜಯಭೇರಿ ಬಾರಿಸಿದ ಮುಂಬೈ ಇಂಡಿಯನ್ಸ್


ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕಾದಾಟದಲ್ಲಿ ಮುಂಬೈ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಮುಂಬೈ ಐದು ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 163 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ ಐದು ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ತಲುಪಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ. ಮೊದಲ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆರ್‌ಸಿಬಿ ನಿರಾಸೆ ಅನುಭವಿಸಿದೆ.

ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸೂರ್ಯಕುಮಾರ್ ಯಾದವ್ ಭರ್ಜರಿ ಆಟವನ್ನು ಪ್ರದರ್ಶಿಸಿದರು. 43 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 79 ರನ್ ಬಾರಿಸಿದ್ದಾರೆ. ಮಾತ್ರವಲ್ಲ ಅಜೇಯವಾಗುಳಿದು ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಉಳಿದಂತೆ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನಲ್ಲೂ ಅಂತಾ ಪ್ರದರ್ಶನ ಕಂಡು ಬರಲಿಲ್ಲ. ಆರಂಭಿಕ ಆಟಗಾರ ಇಶಾನ್ ಕಿಶನ್ 25 ಡಿ ಕಾಕ್ 18, ಹಾರ್ದಿಕ್ ಪಾಂಡ್ಯ 17 ರನ್ ಗಳಿಸಿದರು. ಅಂತಿಮವಾಗಿ ಇನ್ನೂ ಐದು ಎಸೆತಗಳು ಇರುವಂತೆಯೇ ಮುಂಬೈ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.


ಇದಕ್ಕೂ ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 164/6 ರನ್ ಗಳಿಸಿತು. ಆರ್‌ಸಿಬಿ ಪರವಾಗಿ ದೇವದತ್ ಪಡಿಕ್ಕಲ್ ಶ್ರೇಷ್ಠ ಪ್ರದರ್ಶನ ನೀಡಿದ್ದರು. 45 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 74 ರನ್‌ಗಳನ್ನು ಬಾರಿಸಿದರು. 12 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಮಿಂಚಿದರು. ಆದರೆ ಆರ್‌ಸಿಬಿಯ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ದೊರೆಯಲಿಲ್ಲ.

ಬೌಲಿಂಗ್‌ನಲ್ಲಿ ಮಿಂಚಿದ ಬೂಮ್ರಾ ಮುಂಬೈ ಇಂಡಿಯನ್ಸ್ ಬೌಲಿಂಗ್ ಸಂದರ್ಭದಲ್ಲಿ ಬೂಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಬೂಮ್ರಾ ಕೇವಲ 14 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಬೋಲ್ಟ್, ಪೊಲಾರ್ಡ್ ಹಾಗೂ ಚಾಹರ್ ತಲಾ ಒಂದು ವಿಕೆಟ್ ಕಬಳಿಸಿದರು.

ಕಾಮೆಂಟ್‌ಗಳಿಲ್ಲ