IPL 2020, SRH vs KXIP: ವಾರ್ನರ್ ಪಡೆಯ ಅಬ್ಬರ: ಪಂಜಾಬ್ಗೆ 5ನೇ ಸೋಲು
IPL 2020, SRH vs KXIP: ವಾರ್ನರ್ ಪಡೆಯ ಅಬ್ಬರ: ಪಂಜಾಬ್ಗೆ 5ನೇ ಸೋಲು
IPL 2020, Hyderabad vs Punjab: ಪೂರನ್ ಬ್ಯಾಟ್ನಿಂದ ಸಿಕ್ಸರ್ಗಳ ಮಳೆ ಸುರಿಯಿತು.
ಪರಿಣಾಮ ಕೇವಲ 17 ಎಸೆತಗಳಲ್ಲಿ
ಅರ್ಧಶತಕ ಪೂರೈಸಿದರು. ಐಪಿಎಲ್ 2020ರ ಅತ್ಯಂತ ವೇಗದ
ಅರ್ಧಶತಕ ಇದಾಯಿತು.
ದುಬೈ (ಅ. 08):
ಇಲ್ಲಿನ ದುಬೈ ಅಂತರಾಷ್ಟ್ರೀಯ
ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ
ಸನ್ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ನಲ್ಲಿ ಡೇವಿಡ್
ವಾರ್ನರ್ ಹಾಗೂ ಜಾನಿ ಬೈರ್ಸ್ಟೋ ಮಿಂಚಿದರೆ, ಬೌಲರ್ಗಳ ಸಂಘಟಿತ ಹೋರಾಟದ ನೆರವಿನಿಂದ ಸನ್ರೈಸರ್ಸ್ 69 ರನ್ಗಳ ಜಯ ಕಂಡಿದೆ. ನಿಕೋಲಸ್ ಪೂರನ್ ಏಕಾಂಗಿ ಹೋರಾಟ
ಪಂಜಾಬ್ ತಂಡಕ್ಕೆ ಯಾವುದೇ ಪ್ರಯೋಜನ ನೀಡಲಿಲ್ಲ.
ಹೈದರಾಬಾದ್
ನೀಡಿದ್ದ 202 ರನ್ಗಳ ಕಠಿಣ ಟಾರ್ಗೆಟ್
ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮಯಾಂಕ್ ಅಗರ್ವಾಲ್ 9 ರನ್ಗೆ ಔಟ್ ಆದರೆ,
ಸಿಮ್ರಾನ್ ಸಿಂಗ್ 11 ರನ್ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ನಾಯಕ ಕೆ.
ಎಲ್ ರಾಹುಲ್ ಕೂಡ 11 ರನ್ಗೆ
ಸುಸ್ತಾದರು.
ಈ ಸಂದರ್ಭ ಗ್ಲೆನ್
ಮ್ಯಾಕ್ಸ್ವೆಲ್ ಜೊತೆಯಾಗಿರುವ ನಿಕೋಲಸ್ ಪೂರನ್ ಸ್ಫೋಟಕ ಆಟವಾಡಿದರು. ಪೂರನ್ ಬ್ಯಾಟ್ನಿಂದ ಸಿಕ್ಸರ್ಗಳ
ಮಳೆ ಸುರಿಯಿತು. ಪರಿಣಾಮ ಕೇವಲ 17 ಎಸೆತಗಳಲ್ಲಿ
ಅರ್ಧಶತಕ ಪೂರೈಸಿದರು. ಐಪಿಎಲ್ 2020ರ ಅತ್ಯಂತ ವೇಗದ
ಅರ್ಧಶತಕ ಇದಾಯಿ
ಆದರೆ, ಇವರಿಗೆ ಸಾತ್ ನೀಡಬೇಕಿದ್ದ ಮ್ಯಾಕ್ಸ್ವೆಲ್ 7 ರನ್ಗೆ ನಿರ್ಗಮಿಸಿದರೆ, ಮಂದೀಪ್ ಸಿಂಗ್ ಕೂಡ 6 ರನ್ಗೆ ಔಟ್ ಆದರು. ಬಳಿಕ ಪೂರನ್ ಕೂಡ ಅಂತಿಮವಾಗಿ 37 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಿಡಿಸಿ 77 ರನ್ಗೆ ಔಟ್ ಆದರು. ನಂತರ ಬಂದ ಬ್ಯಾಟ್ಸ್ಮನ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಪಂಜಾಬ್ ತಂಡ 16.5 ಓವರ್ನಲ್ಲಿ 132 ರನ್ಗೆ ಆಲೌಟ್ ಆಯಿತು. ಪಂಜಾಬ್ ಪರ ರಶೀದ್ ಖಾನ್ 3 ವಿಕೆಟ್ ಕಿತ್ತರೆ, ಖಲೀಲ್ ಅಹ್ಮದ್ ಹಾಗೂ ನಟರಾಜನ್ ತಲಾ 2 ವಿಕೆಟ್ ಮತ್ತು ಅಭಿಷೇಕ್ ಶರ್ಮಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಬ್ಯಾಟಿಂಗ್ಗೆ ಇಳಿದ ಹೈದರಾಬಾದ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. ಓಪನರ್ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋ ಭರ್ಜರಿ ಬ್ಯಾಟಿಂಗ್ ಮಾಡಿದರು. 5 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.
ಪವರ್ ಪ್ಲೇ ಮುಗಿದ
ಬಳಿಕ ಅಬ್ಬರಿಸಿದ ಬೈರ್ಸ್ಟೋ ಮನಬಂದಂತೆ ಬ್ಯಾಟ್ ಬೀಸಿದರು. ಪಂಜಾಬ್ ಬೌಲರ್ಗಳ ಬೆವರಿಳಿಸಿದ
ಬೈರ್ಸ್ಟೋ ಆಕರ್ಷಕ ಅರ್ಧಶತಕ ಸಿಡಿಸಿ 10 ಓವರ್ ಆಗುವ
ಹೊತ್ತಿಗೆ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಈ ಜೋಡಿ ಅಮೋಘ 160 ರನ್ಗಳ ಜೊತೆಯಾಟ ಆಡಿತು. ವಾರ್ನರ್ 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 52 ರನ್ಗೆ ಔಟ್ ಆದರು.



Super sir
ಪ್ರತ್ಯುತ್ತರಅಳಿಸಿ