KKR vs CSK: ಭರ್ಜರಿ ಬೌಲಿಂಗ್ ಯಿಂದಾಗಿ ಕೆಕೆಆರ್ ಗೆ ವಿಜಯ
IPL 2020, Chennai vs Kolkata : ಉಭಯ ತಂಡಗಳು ಐಪಿಎಲ್ನಲ್ಲಿ 20 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 13 ಬಾರಿ ವಿಜಯ ಸಾಧಿಸಿದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್ 7 ಬಾರಿ ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಅಬುಧಾಬಿಯ ಶೇಖ್
ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್
ಕಿಂಗ್ಸ್ ವಿರುದ್ಧ 10 ರನ್ಗಳ ಭರ್ಜರಿ ಜಯ ಸಾಧಿಸಿದೆ. 168 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸಿಎಸ್ಕೆ
ಬಾಟ್ಸ್ಮನ್ಗಳು ಕೆಕೆಆರ್ ಬೌಲರುಗಳ ಭರ್ಜರಿ ಬೌಲಿಂಗ್ ಮುಂದೆ ಮಂಡಿಯೂರಿದರು. ಈ ಮೂಲಕ ಚೆನ್ನೈ
ಟೂರ್ನಿಯ ನಾಲ್ಕನೇ ಸೋಲನುಭವಿಸುವಂತಾಯಿತು. ಇದಕ್ಕೂ ಮುನ್ನ ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿಯ
ಆಕರ್ಷಕ ಅರ್ಧಶತಕದ ನೆರವಿನಿಂದ ಕೆಕೆಆರ್ ನಿಗದಿತ 20 ಓವರ್ನಲ್ಲಿ
167 ರನ್ ಪೇರಿಸಿತು.
ಈ ಸವಾಲಿನ
ಮೊತ್ತವನ್ನು ಬೆನ್ನತ್ತಿದ ಸಿಎಸ್ಕೆಗೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್
ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಕೆಕೆಆರ್ ಬೌಲರುಗಳ ವಿರುದ್ದ ತಿರುಗಿಬಿದ್ದ
ಸಿಎಸ್ಕೆ ಓಪನರ್ಗಳು 3 ಓವರ್ ಮುಕ್ತಾಯದ
ವೇಳೆಗೆ 25 ರನ್
ಬಾರಿಸಿದ್ದರು. ಆದರೆ 4ನೇ ಓವರ್ನಲ್ಲಿ ಶಿವಂ
ಮಾವಿ ಕೊಲ್ಕತ್ತಾಗೆ ಮೊದಲ ಯಶಸ್ಸು ತಂದುಕೊಟ್ಟರು. 10 ಎಸೆತಗಳಲ್ಲಿ 17 ರನ್ ಬಾರಿಸಿದ್ದ ಫಾಫ್ ಡುಪ್ಲೆಸಿಸ್ ಕೀಪರ್ ದಿನೇಶ್
ಕಾರ್ತಿಕ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇನ್ನು ಅರ್ಧಶತಕದ
ಬೆನ್ನಲ್ಲೇ ಶೇನ್ ವಾಟ್ಸನ್ ಸುನೀಲ್ ನರೈನ್ಗೆ ವಿಕೆಟ್ ನೀಡಿ ಹೊರನಡೆದರು. ಕೊನೆಯ ಐದು
ಓವರ್ಗಳಲ್ಲಿ ಸಿಎಸ್ಕೆಗೆ ಗೆಲ್ಲಲು 58 ರನ್ಗಳ
ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ಸ್ಯಾಮ್ ಕರ್ರನ್ ಹಾಗೂ ಧೋನಿ ರನ್ ಗಳಿಕೆ ವೇಗ
ಹೆಚ್ಚಿಸಿದರು. ಆದರೆ 11 ರನ್ ಗಳಿಸಿದ್ದ
ಸಿಎಸ್ಕೆ ನಾಯಕನನ್ನು ವರಣ್ ಚಕ್ರವರ್ತಿ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಹೊರಗಟ್ಟಿದರು. ಇದರ
ಬೆನ್ನಲ್ಲೇ ಸ್ಯಾಮ್ ಕರ್ರನ್ (17) ಕೂಡ ಆಂಡ್ರೆ ರಸೆಲ್
ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಕೊನೆಯ ಎರಡು
ಓವರ್ಗಳಲ್ಲಿ 36 ರನ್ಗಳ ಗುರಿ
ಪಡೆದ ಸಿಎಸ್ಕೆ ತಂಡವು 19ನೇ ಓವರ್ನಲ್ಲಿ 10 ರನ್ ಗಳಿಸಿತು. ಅದರಂತೆ ಕೊನೆಯ ಓವರ್ನಲ್ಲಿ
ರವೀಂದ್ರ ಜಡೇಜಾ ಹಾಗೂ ಕೇದರ್ ಜಾಧವ್ ಮುಂದೆ 6 ಎಸೆತಗಳಲ್ಲಿ 26 ರನ್ಗಳ ಗುರಿಯಿತ್ತು. ಆದರೆ ಆಂಡ್ರೆ ರಸೆಲ್ ಎಸೆದ ಅಂತಿಮ
ಓವರ್ನಲ್ಲಿ ಮೂಡಿ ಬಂದಿದ್ದು ಕೇವಲ 15 ರನ್ಗಳು ಮಾತ್ರ.
ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ 10 ರನ್ಗಳ ವಿಜಯ
ತನ್ನದಾಗಿಸಿಕೊಂಡಿತು.
ಕೆಕೆಆರ್ ಪರ 4 ಓವರ್ಗಳಲ್ಲಿ ಕೇವಲ 25 ರನ್ ನೀಡಿ ಪ್ಯಾಟ್ ಕಮಿನ್ಸ್ ಮಿಂಚಿದ್ರೆ, ಸ್ಪಿನ್ನರ್ಗಳಾದ ಸುನೀಲ್ ನರೈನ್ ಹಾಗೂ ವರುಣ್
ಚಕ್ರವರ್ತಿ ತಲಾ ಒಂದು ವಿಕೆಟ್ ಉರುಳಿಸಿ ಸಿಎಸ್ಕೆ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದರು.



ಕಾಮೆಂಟ್‌ಗಳಿಲ್ಲ