NIA ತನಿಖೆಯಲ್ಲಿ ಸ್ಪೋಟಕ ಮಾಹಿತಿ : ಉಗ್ರ ಕೃತ್ಯಗಳಲ್ಲಿ ಬೆಂಗಳೂರಿನ ಯುವಕರು ಭಾಗಿ
NIA ತನಿಖೆಯಲ್ಲಿ ಸ್ಪೋಟಕ ಮಾಹಿತಿ : ಉಗ್ರ ಕೃತ್ಯಗಳಲ್ಲಿ ಬೆಂಗಳೂರಿನ ಯುವಕರು ಭಾಗಿ
NIA ತನಿಖೆಯಲ್ಲಿ ಸ್ಪೋಟಕ ಮಾಹಿತಿ ದೊರೆತಿದೆ ಸಿರಿಯಾದ ಉಗ್ರಗಾಮಿ
ಸಂಘಟನೆಗಳಲ್ಲಿ ಬೆಂಗಳೂರಿನ ಯುವಕರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಇರ್ಫಾನ್ ನಾಸೀರ್
ಹಾಗೂ ಅಬ್ದುಲ್ ಆಹ್ಮದ್ ಖಾದರ್ ನಿಷೇಧಿತ ಹಿಜ್ಬುತ್ ತೆಹ್ರಿರ್ ಸಂಘಟನೆ ಸಕ್ರಿಯ
ಕಾರ್ಯಕರ್ತರಾಗಿದ್ದು, ಶಂಕಿತ ಉಗ್ರ ವೈದ್ಯ
ಅಬ್ದುರ್ ರೆಹಮಾನ್ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ್ದ ಎನ್ಐಎ ಅಧಿಕಾರಿಗಳು ವಿಚಾರಣೆ
ಆರಂಭಿಸಿದ್ದರು.
ಬೆಂಗಳೂರು
(ಅಕ್ಟೋಬರ್ 13); ರಾಜ್ಯ ರಾಜಧಾನಿ
ಬೆಂಗಳೂರಿನ ಯುವಕರು ಸಾಲು ಸಾಲಾಗಿ ಸಿರಿಯಾದ ಉಗ್ರ ಸಂಘಟನೆಯಾದ ಹಿಜ್ಬುಲ್ ತೆಹ್ರಿರ್ ಸಂಘಟನೆಗೆ
ಸೇರ್ಪಡೆಯಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಎನ್ಐಎ ತನಿಖೆಯಿಂದ ಬಯಲು ಮಾಡಿದೆ.
ಎನ್ಐಎ ಇತ್ತೀಚೆಗೆ ಬೆಂಗಳೂರಲ್ಲಿ ಹಿಜ್ಬುತ್ ತೆಹ್ರಿರ್ ಉಗ್ರರನ್ನು ಬಂಧಿಸಿತ್ತು. ಈ ಪ್ರಕರಣದ
ತನಿಖೆಯ ಬೆನ್ನುಹತ್ತಿದ ಅಧಿಕಾರಿಗಳು ಇದೀಗ ಅನೇಕ ಸ್ಫೋಟಕ ಮಾಹಿತಿಗಳನ್ನು
ಹೊರಗೆಡಹುತ್ತಿದ್ದಾರೆ. ಎನ್ಐಎ ತನಿಖೆಯಂತೆ 2013-14 ರಲ್ಲಿ ಬೆಂಗಳೂರಿನಿಂದ 5 ಯುವಕರು ಸಿರಿಯಾಗೆ ತೆರಳಿದ್ದಾರೆ. ಈ 5 ಯುವಕರನ್ನು ನಗರದ ಇರ್ಫಾನ್ ನಾಸೀರ್ ಮತ್ತು ಅಬ್ದುಲ್
ಅಹ್ಮದ್ ಖಾದರ್ ಎಂಬವರೇ ಸಿರಿಯಾಗೆ ಕಳುಹಿಸಿದ್ದಾರೆ ಎಂಬ ಅಂಶವೂ ಇದೀಗ ಬಹಿರಂಗವಾಗಿದೆ.
ಇರ್ಫಾನ್ ನಾಸೀರ್
ಹಾಗೂ ಅಬ್ದುಲ್ ಆಹ್ಮದ್ ಖಾದರ್ ನಿಷೇಧಿತ ಹಿಜ್ಬುತ್ ತೆಹ್ರಿರ್ ಸಂಘಟನೆ ಸಕ್ರಿಯ
ಕಾರ್ಯಕರ್ತರಾಗಿದ್ದು, ಶಂಕಿತ ಉಗ್ರ ವೈದ್ಯ
ಅಬ್ದುರ್ ರೆಹಮಾನ್ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ್ದ ಎನ್ಐಎ ಅಧಿಕಾರಿಗಳು ವಿಚಾರಣೆ
ಆರಂಭಿಸಿದ್ದರು. ಖುರಾನ್ ಸರ್ಕಲ್ ಎಂದು ಮಾಡಿಕೊಂಡು ಬೆಂಗಳೂರಿನಿಂದ ಸಿರಿಯಾಗೆ ಕಳುಹಿಸಿ ಐಸಿಸ್
ಪರ ಕೆಲಸ ಮಾಡಲು ಯುವಕರನ್ನು ಈ ಆರೋಪಿಗಳು
ದರೆ, ಇನ್ನೂ ಸಾಕಷ್ಟು ಮಂದಿ ಸಿರಿಯಾಗೆ ತೆರಳಿರುವ ಸಾಧ್ಯತೆ
ಇದೆ. ಈ ಹಿನ್ನೆಲೆ ತನಿಖೆಯನ್ನು ತೀವ್ರಗೊಳಿಸಿರುವ ಎನ್ಐಎ ಅಧಿಕಾರಿಗಳು ಈ ಜಾಲವನ್ನು ಭೇದಿಸುವ
ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.



ಕಾಮೆಂಟ್‌ಗಳಿಲ್ಲ