IPL 2020 RCB Vs DEHLI : RCB ವಿರುದ್ಧ ಡೆಲ್ಲಿ ಜಯಭೇರಿ: ಸೋತರೂ ಪ್ಲೇ ಆಫ್ ತಲುಪಿದ RCB
IPL 2020 RCB Vs DEHLI : RCB ವಿರುದ್ಧ ಡೆಲ್ಲಿ ಜಯಭೇರಿ: ಸೋತರೂ ಪ್ಲೇ ಆಫ್ ತಲುಪಿದ RCB
![]() |
| source : google |
ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್‌ಗಳ ಗೆಲುವು ಸಾಧಿಸಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ ಒಂದು ಓವರ್ ಇರುವಂತೆ ಪಂದ್ಯ ಸೋತರೂ ಆರ್‌ಸಿಬಿ ಕೂಡ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿಯನ್ನು 152ರನ್‌ಗಳಿಗೆ ಕಟ್ಟಿಹಾಕಿತು. ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ 50, ಜೋಶ್ ಫಿಲಿಪ್ 12, ವಿರಾಟ್ ಕೊಹ್ಲಿ 29, ಎಬಿಡಿ ವಿಲಿಯರ್ಸ್ 35, ಶಿವಂ ದುಬೆ ಕೊನೆಯಲ್ಲಿ 17ರನ್‌ಗಳಿಸಿದ ಪರಿಣಾಮ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 152ರನ್ ಕಲೆಹಾಕಿತು. 153ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಓಪನರ್ ಪೃಥ್ವಿ ಶಾ (9)ಮತ್ತೊಮ್ಮೆ ಕೈ ಕೊಟ್ಟರು. ಪರಿಣಾಮ ಜವಾಬ್ದಾರಿ ಹೊತ್ತ ಶಿಖರ್ ಧವನ್ ಹಾಗೂ ಅಜಿಂಕ್ಯಾ ರಹಾನೆ ತಲಾ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿನತ್ತ ಕೊಂಡೊಯ್ದರು.
![]() |
| source : google |
ಶಿಖರ್ ಧವನ್ 41 ಎಸೆತಗಳಲ್ಲಿ 54ರನ್ ಸಿಡಿಸಿದ್ರೆ, ಮೂರನೇ ಕ್ರಮಾಂಕದಲ್ಲಿ ಆಡಿದ ರಹಾನೆ 46 ಎಸೆತಗಳಲ್ಲಿ 60 ರನ್ ಕಲೆಹಾಕಿ ಔಟಾದ್ರು. ಶ್ರೇಯಸ್ ಅಯ್ಯರ್ ಏಳು ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಕೊನೆಗೆ ಮಾರ್ಕಸ್ ಸ್ಟೋಯ್ನಿಸ್ ಮತ್ತು ರಿಷಭ್ ಪಂತ್ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್ ಒಂದು ಓವರ್ ಬಾಕಿ ಇರುವಂತೆ ಪಂದ್ಯವನ್ನು ಗೆದ್ದುಕೊಂಡಿತು.
ಆರು ವಿಕೆಟ್‌ಗಳ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 16 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಪಂದ್ಯ ಸೋತ ಆರ್‌ಸಿಬಿಯು ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿದ್ದು, 14 ಪಾಯಿಂಟ್ಸ್‌ನೊಂದಿಗೆ ಸದ್ಯ ಮೂರನೇ ಸ್ಥಾನದಲ್ಲಿ ಉಳಿದಿದೆ.



ಕಾಮೆಂಟ್‌ಗಳಿಲ್ಲ