Breaking News

IPL 2020 SRH Vs DC : ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಬಾರಿ ಫೈನಲ್​ಗೆ ಡೆಲ್ಲಿ

 

IPL 2020 DC vs SRH : ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಬಾರಿ ಫೈನಲ್​ಗೆ ಡೆಲ್ಲಿ 

source : google

IPL 2020 Playoffs, Delhi Capitals vs Sunrisers Hyderabad:
 ಈ ಸಂದರ್ಭ ಒಂದಾದ ಕೇನ್ ಹಾಗೂ ಅಬ್ದುಲ್ ಸಮದ್ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಮನಮೋಹಕ ಹೊಡೆತಗಳನ್ನು ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿದರು. ಆದರೆ, 18ನೇ ಓವರ್​ನಲ್ಲಿ ವಿಲಿಯಮ್ಸನ್ ಔಟ್ ಆಗಿದ್ದು ಹೊಡೆತಬಿದ್ದಂತಾಯಿತು.
ಅಬುಧಾಬಿ (ನ. 08) ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿ ಐಪಿಎಲ್​ನ 2ನೇ ಕ್ವಾಮಿಫೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಕೇನ್ ವಿಲಿಯಮ್ಸನ್ ಗೆಲುವಿಗೆ ಹೋರಾಟ ನಡೆಸಿದರಾದರೂ ಫಲ ಸಿಗದೆ ಎಸ್​ಆರ್​ಹೆಚ್ ತನ್ನಅಭಿಯಾನ ಅಂತ್ಯಗೊಳಿಸಿದೆ. ಬ್ಯಾಟಿಂಗ್ - ಬೌಲಿಂಗ್​ನಲ್ಲಿ ಮಿಂಚಿದ ಅಯ್ಯರ್ ಪಡೆ 17 ರನ್​ಗಳ ಜಯ ಸಾಧಿಸಿತು.

ಡೆಲ್ಲಿ ನೀಡಿದ್ದ 190 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ದೊಡ್ಡ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 2ನೇ ಓವರ್​ನ ರಬಾಡ ಬೌಲಿಂಗ್​ನಲ್ಲಿ ನಾಯಕ ಡೇವಿಡ್ ವಾರ್ನರ್(2) ಕ್ಲೀನ್ ಬೌಲ್ಡ್ ಆದರೆ, ಪ್ರಿಯಂ ಗರ್ಗ್ 12 ಎಸೆತಗಳಲ್ಲಿ 17 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು. ಇದರ ಬೆನ್ನಲ್ಲೇ 14 ಎಸೆತಗಳಲ್ಲಿ 21 ರನ್ ಗಳಿಸಿ ಮನೀಶ್ ಪಾಂಡೆ ಕೂಡ ನಿರ್ಗಮಿಸಿದರು.
ಕೇನ್ ವಿಲಿಯಮ್ಸನ್ ಜೊತೆ ಇನ್ನಿಂಗ್ಸ್​ ಕಟ್ಟಲು ಹೊರಟ ಜೇಸನ್ ಹೋಲ್ಡರ್(11) ಕೂಡ ನಿರಾಸೆ ಮೂಡಿಸಿದರು. ಈ ಸಂದರ್ಭ ಒಂದಾದ ಕೇನ್ ಹಾಗೂ ಅಬ್ದುಲ್ ಸಮದ್ ಗೆಲುವಿಗೆ ಹೋರಾಟ ನಡೆಸಿದರು. ಅದರಂತೆ ಮನಮೋಹಕ ಹೊಡೆತಗಳನ್ನು ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿದರು. ಆದರೆ, 18ನೇ ಓವರ್​ನಲ್ಲಿ ವಿಲಿಯಮ್ಸನ್ ಔಟ್ ಆಗಿದ್ದು ಹೊಡೆತಬಿದ್ದಂತಾಯಿತು. ಹೈದರಾಬಾದ್ ಮತ್ತೆ ಸೋಲಿನ ಸುಳಿಗೆ ಸಿಲುಕಿತು. ಕೇನ್-ಸಮದ್ ಜೋಡಿ 31 ಎಸೆತಗಳಲ್ಲಿ 57 ರನ್ ಸಿಡಿಸಿದರು.
ಆದರೆ, ನಂತರ ಬಂದ ಬ್ಯಾಟ್ಸ್​ಮನ್​ಗಳು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಸಮದ್ 16 ಎಸೆತಗಳಲ್ಲಿ 33 ರನ್ ಸಿಡಿಸಿದರು. ಅಂತಿಮವಾಗಿ ಹೈದರಾಬಾದ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಕಂಡಿತು. ಡೆಲ್ಲಿ ಪರ ಕಗಿಸೊ ರಬಾಡ 4 ವಿಕೆಟ್ ಕಿತ್ತು ಮಿಂಚಿದರೆ, ಮಾರ್ಕಸ್ ಸ್ಟಾಯಿನಿಸ್ 3 ವಿಕೆಟ್, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
source : google

17 ರನ್​ಗಳ ಗೆಲುವಿನಿಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶ ಮಾಡಿದೆ. ನ. 10 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಪ್ರಶಸ್ತಿಗೆ ಮುತ್ತಿಕ್ಕಲು ಹೋರಾಟ ನಡೆಸಲಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ ಆಗಿ ಕಣಕ್ಕಿಳಿದಿರುವ ಮಾರ್ಕಸ್ ಸ್ಟಾಯಿನಿಸ್ ಹಾಗೂ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ ಮೊದಲ 6 ಓವರ್​ನಲ್ಲಿ 65 ರನ್ ಮೂಡಿಬಂತು. ಇವರಿಬ್ಬರ ಭರ್ಜರಿ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರಶೀದ್ ಖಾನ್.

27 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ 28 ರನ್ ಗಳಿಸಿದ್ದ ಸ್ಟಾಯಿನಿಸ್ 9ನೇ ಓವರ್​ನಲ್ಲಿ ಔಟ್ ಆದರು. ಈ ಜೋಡಿ ಮೊದಲ ವಿಕೆಟ್​ಗೆ 86 ರನ್​ಗಳ ಕಾಣಿಕೆ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 20 ಎಸೆತಗಳಲ್ಲಿ 21 ರನ್ ಗಳಿಸಿ ಔಟ್ ಆದರು.

ಈ ನಡುವೆ ಧವನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಅಯ್ಯರ್ ನಿರ್ಗಮನದ ಬಳಿಕ ಧವನ್ ಜೊತೆಯಾದ ಶಿಮ್ರೋನ್ ಹೆಟ್ಮೇರ್ ಅಮೋಘ ಆಟ ಪ್ರದರ್ಶಿಸಿದರು. ಹಿಂದಿನ ರನ್ ಗತಿಯನ್ನ ಕಾಪಾಡಿಕೊಂಡು ಬ್ಯಾಟ್ ಬೀಸಿದ ಈ ಜೋಡಿ 52 ರನ್ ಕಲೆಹಾಕಿತು.

ಕಾಮೆಂಟ್‌ಗಳಿಲ್ಲ