ಶಾಲಾರಂಭ ಅಧ್ಯಯನಕ್ಕೆ ತಜ್ಞರ ಸಮಿತಿ
ಶಾಲಾರಂಭ ಅಧ್ಯಯನಕ್ಕೆ ತಜ್ಞರ ಸಮಿತಿ
![]() |
| source : google |
ಶಾಲೆ –ಕಾಲೆಜುಗಳ ಆರಂಭ ಅ.15 ರಿಂದ ಮಾಡಲು ಕೇಂದ್ರ ಸರ್ಕಾರ ಅನುಮತಿ
ನೀಡಿದ್ದರು. ಅದರ ಸಾಧಕ ಬಾಧಕಗಳ ಕುರಿತು ವಿಸ್ತೃತ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ
ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶಾಲಾ – ಕಾಲೇಜು ಆರಂಭದ ಕುರಿತು ಎಸ್ ಸುರೇಶ ಕುಮಾರ ಪ್ರಾಥಾಮಿಕ ಮತ್ತು
ಪ್ರೌಢ ಶಾಲಾ ಸಚಿವರು ಮತ್ತುಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ ಸಲಹೆ ಸೂಚನೆಗಳನ್ನು ಕೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿ.ಶ್ರೀರಾಮುಲು ವರ್ಚುವಲ್ ವೇದಿಕೆ ಮೂಲಕ ತಜ್ಞರು
ಮತ್ತು ಇಲಾಖೆ ಅಧಿಕಾರಿಗಳ ಜೊತೆ ಸಂವಾದ ನಡೆಸಿದರು. ಶಾಲೆಗಳನ್ನು ಆರಂಭಿಸಲು ತಜ್ಞರ ಮೊರೆ ಹೋಗುವುದಾಗಿ
ಹೇಳಿದ್ದಾರೆ. ಮಕ್ಕಳ ತಜ್ಞರು ಮತ್ತು ಇಲಾಖೆಯಲ್ಲಿರುವ ಪರಿಣಿತ ಅಧಿಕಾರಗಳ ಸಮಿತಿ ರಚಿಸಬೇಕು ವಿಸ್ತ್ರು ಅಧ್ಯಯನ ಸಮಾಲೋಚನೆ ನಡೆಸಿ 2 ದಿನಗಳಲ್ಲಿ ವರಧಿ
ನೀಡಬೇಕೆಂದು ಸೂಚಿಸಿದ್ದಾರೆ. ಮಕ್ಕಳ ವಿಷಯ ತುಂಬ ಸೂಕ್ಷ್ಮವಾಗಿದೆ ಹೀಗಾಗಿ ಸಕರಾತ್ಮಕ ಮತ್ತು ನಕರಾತ್ಮಕ
ಅಂಶಗಳನ್ನು ಚರ್ಚಿಸಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಹಿತದೃಷ್ಟಿಯಿಂದ ಪೂರಕ ಕ್ರಮಗಳಿಗೆ ಪ್ರಾಶಸ್ತ್ಯ
ನೀಡಿದೆ.
ಕರೋನಾದಿಂದಾಗಿ ಶಿಕ್ಷಣ ಇಲಾಖೆ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಶಾಲೆ
ಪ್ರಾರಂಭಿಸುವ ಕುರಿತು ಯಾವುದೆ ಸಕರಾತ್ಮಕ ನಿರ್ಧಾರಗಳನ್ನು ತೆಗೆದುಕೋಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗುದೆ.
ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ ಬಳಿಕವು ಶಾಲೆಗಳನ್ನು ಆರಂಭಿಸಲು ಪರ – ವಿರೋಧದ ದ್ವನಿಗಳೆದ್ದಿವೆ.
ಮಕ್ಕಳಲ್ಲಿ ಸಾಮಾಜಿಕ ಅಂತರ ಮಾಸ್ಕ ಕಡ್ಡಾಯದಂತಹ ಮುನ್ನೆಚರುಕೆ ಕ್ರಮಗಳನ್ನು ತೆಗೆದುಕೊಳ್ಳುವುದು
ಅಸಾಧ್ಯವಾಗಿದೆ. ಒಂದು ವೇಳೆ ಮಕ್ಕಳಿಗೆ ಸೊಂಕು ತಗಿಲಿದರೆ ಅದು ಮನೆಗೂ ಮತ್ತು ಸಮುದಾಯಕ್ಕು ತರುತ್ತಾರೆ
ಎನ್ನುವ ತಳಮಳ ವ್ಯಕ್ತವಾಗಿದೆ.



ಕಾಮೆಂಟ್‌ಗಳಿಲ್ಲ