Breaking News

IPL 2020, RR vs DC: ರಾಜಸ್ಥಾನ್ ಕಳಪೆ ಆಟ: ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

 

IPL 2020, RR vs DC:  ರಾಜಸ್ಥಾನ್ ಕಳಪೆ ಆಟ: ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

source:google

ಶಾರ್ಜಾ (ಅ. 09): ಇಲ್ಲಿನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿದ ಅಯ್ಯರ್ ಪಡೆ 46 ರನ್​ಗಳ ಅಮೋಘ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಡೆಲ್ಲಿ ನೀಡಿದ್ದ 185 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೋಸ್ ಬಟ್ಲರ್(13) ಔಟ್ ಆದರಾದರೂ ಬಳಿಕ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಕೆಲ ಸಮಯ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಆದರೆ, ಪವರ್ ಪ್ಲೇ ಓವರ್ ಮುಗಿದ ಬೆನ್ನಲ್ಲೇ ಸ್ಮಿತ್ ದೊಡ್ಡ ಹೊಡೆತಕ್ಕೆ ಮಾರುಹೋಗಿ 24 ರನ್​ಗೆ ನಿರ್ಗಮಿಸಿದರು.

source : google

ಸಂಜು ಸ್ಯಾಮ್ಸನ್ ಈ ಬಾರಿ ಮತ್ತೊಮ್ಮೆ ಎಡವಿ 5 ರನ್​ಗೆ ಬ್ಯಾಟ್ ಕೆಳಗಿಟ್ಟರು. ಮಾಹಿಪಾಲ್ ಲಮ್ರೋರ್(1) ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಇತ್ತ ಚೆನ್ನಾಗಿಯೇ ರನ್ ಕಲೆಹಾಕುತ್ತಿದ್ದ ಜೈಸ್ವಾಲ್ 34 ರನ್ ಗಳಿಸಿರುವಾಗ ಸ್ಟಾಯಿನಿಸ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರು ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ರಾಹುಲ್ ತೇವಾಟಿಯ 29 ಎಸೆತಗಳಲ್ಲಿ 38 ರನ್ ಬಾರಿಸಿದರು. ಅಂತಿಮವಾಗಿ ಆರ್​ಆರ್ ತಂಡ 19.4 ಓವರ್​ನಲ್ಲಿ 138 ರನ್​ಗೆ ಸರ್ವಪತನ ಕಂಡಿತು. ಆಲೌಟ್ ಆಯಿತು. ಡೆಲ್ಲಿ ಪರ ಕಗಿಸೊ ರಬಾಡ 3, ಆರ್. ಅಶ್ವಿನ್, ಮಾರ್ಕಸ್ ಸ್ಟಾಯಿನಿಸ್ ಹಾಗೂ ತಲಾ 2 ವಿಕೆಟ್ ಕಿತ್ತರೆ, ಅನ್ರಿಕ್ ನಾರ್ಟ್ಜೆ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತನ್ನ ಮೊದಲ ಓವರ್​​ನಲ್ಲೇ ಜೋಫ್ರಾ ಆರ್ಚರ್ ಅವರು ಶಿಖರ್ ಧವನ್(5) ಅವರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು.

ಬಳಿಕ 19 ರನ್ ಬಾರಿಸಿದ್ದ ಪೃಥ್ವಿ ಶಾ ಅವರನ್ನೂ ಔಟ್ ಮಾಡಿದರು. ತಂಡಕ್ಕೆ ಆಸರೆಯಾಗಬೇಕಿದ್ದ ನಾಯಕ ಶ್ರೇಯಸ್ ಅಯ್ಯರ್ 22 ರನ್​ಗೆ ಹಾಗೂ ರಿಷಭ್ ಪಂತ್ ಕೇವಲ 5 ಗಳಿಸಿರುವಾಗ ರನೌಟ್​ಗೆ ಬಲಿಯಾದರು.

ಕೊನೆಯ ಹಂತದಲ್ಲು ಅಕ್ಷರ್ ಪಟೇಲ್ (17) ಹಾಗೂ ಹರ್ಷಲ್ ಪಟೇಲ್ (16) ಬ್ಯಾಟ್ ಬೀಸಿ ತಂಡದ ರನ್ ಗತಿಯನ್ನು ಏರಿಸಿದರು. ಅಂತಿಮವಾಗಿ ಡೆಲ್ಲಿ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

ಕಾಮೆಂಟ್‌ಗಳಿಲ್ಲ