Kannada Movies: ಪರಭಾಷೆಗಳಿಗೆ ರಿಮೇಕ್ ಆಗಿ ಸದ್ದು ಮಾಡುತ್ತಿವೆ ಕನ್ನಡದ ಈ ಸಿನಿಮಾಗಳು
Kannada Movies: ಪರಭಾಷೆಗಳಿಗೆ ರಿಮೇಕ್ ಆಗಿ ಸದ್ದು ಮಾಡುತ್ತಿವೆ ಕನ್ನಡದ ಈ ಸಿನಿಮಾಗಳು
ಇತ್ತೀಚೆಗೆ ಕನ್ನಡ
ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಹೆಚ್ಚೆಚ್ಚು ರಿಮೇಕ್ ಆಗುತ್ತಿವೆ. ಸ್ಟಾರ್‌ಗಳ, ದೊಡ್ಡ ಮಟ್ಟದ ಕಮರ್ಷಿಯಲ್ ಚಿತ್ರ ಮಾಡದಿದ್ದರೂ ತಮ್ಮ
ಗಟ್ಟಿ ಕಂಟೆಂಟ್ ಮೂಲಕ ಸೆಳೆದಿರುವ ನಿರ್ದೇಶಕರೂ ಈಗ ತಮ್ಮ ಚಿತ್ರಗಳೊಂದಿಗೆ ಪರಭಾಷೆಗಳಿಗೆ
ತಲುಪುತ್ತಿದ್ದಾರೆ.
ಇವರೆಲ್ಲ ದೊಡ್ಡ
ಬಜೆಟ್‌ನ ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸುವವರಲ್ಲ. ದೊಡ್ಡ ಸ್ಟಾರ್‌ಗಳನ್ನಿರಿಸಿಕೊಂಡು
ಪ್ಯಾನ್ ಇಂಡಿಯಾ ಸಿನಿಮಾ ಮಾಡಿದವರೂ ಅಲ್ಲ. ಆದರೆ, ವಿಶಿಷ್ಟ ಕಥೆ, ನಿರೂಪಣಾ ಶೈಲಿಯ ಚಿತ್ರಗಳೊಂದಿಗೆ ಗಮನಸೆಳೆದವರು. ಈ
ಬಗೆಯ ಕಂಟೆಂಟ್ ಕೇಂದ್ರಿತ ಚಿತ್ರಗಳಿಂದ ಗುರುತಿಸಿಕೊಂಡ ಪವನ್‌ಕುಮಾರ್, ಹೇಮಂತ್ ರಾವ್ , ರಾಧಾಕೃಷ್ಣ ರೆಡ್ಡಿ, ಜಯತೀರ್ಥರ ಚಿತ್ರಗಳಿಗೀಗ ಕನ್ನಡದ ಸೀಮೆದಾಟಿ ಹೋಗುವ
ಸಂಭ್ರಮ. ಇವರ ಸಿನಿಮಾಗಳು ಪರಭಾಷೆಯಲ್ಲಿಯೂ ಸದ್ದು ಮಾಡುತ್ತಿವೆ.
ದೇಶದ ಗಡಿ ದಾಟಿದ ಪವನ್
'ಲೂಸಿಯಾ' ಮೂಲಕ ವಿಶಿಷ್ಟ ನಿರ್ದೇಶಕ ಎಂದು ಹೆಸರು ಮಾಡಿದ ನಿರ್ದೇಶಕ ಕಮ್ ನಟ ಪವನ್‌ಕುಮಾರ್ ಅವರ 'ಯು ಟರ್ನ್' ಸಿನಿಮಾ ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗೆ ರಿಮೇಕ್ ಆಗಿ ಬಿಡುಗಡೆಯಾಗಿದೆ. ತೆಲುಗು ಮತ್ತು ತಮಿಳಿನಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ರಿಮೇಕ್ ರೈಟ್ಸ್ ಬೆಂಗಾಲಿ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳಿಗೆ ಮಾರಾಟವಾಗಿದೆ. ಬೆಂಗಾಲಿಯಲ್ಲಿ ಚಿತ್ರೀಕರಣ ಕೂಡ ಆರಂಭವಾಗಿದೆ. ಭಾರತೀಯ ಭಾಷೆಗಳ ನಂತರ ಶ್ರೀಲಂಕಾದ ಸಿಂಹಳ ಭಾಷೆಗೆ ರಿಮೇಕ್ ಆಗಿ ಬಿಡುಗಡೆಯಾಗಿತ್ತು. ಈಗ ಫಿಲಿಪೈನ್ಸ್ ದೇಶದ ಫಿಲಿಪಿನೋ ಭಾಷೆಗೆ ಚಿತ್ರ ರಿಮೇಕ್ ಆಗುತ್ತಿದ್ದು, ಅದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಿಲಿಪಿನೋ ಭಾಷೆಗೆ ರಿಮೇಕ್ ಆದ ಮೊದಲ ಕನ್ನಡ ಚಿತ್ರ ಮತ್ತು ವಿದೇಶಿ ಭಾಷೆಯಲ್ಲಿ ತಯಾರಾದ ಎರಡನೇ ಕನ್ನಡ ಚಿತ್ರವಾಗಲಿದೆ. ಈ ಹಿಂದೆ ರಾಜ್‌ಕುಮಾರ್ ಅವರ
'ಅನುರಾಗ ಅರಳಿತು' ಸಿನಿಮಾ ಬಾಂಗ್ಲಾ ಭಾಷೆಯಲ್ಲಿ ರಿಮೇಕ್ ಆಗಿತ್ತು.'ಈ ಸಿನಿಮಾದ
ಯಶಸ್ಸನ್ನು ನಾನು ರೈಟರ್ ಆಗಿ ಅನುಭವಿಸಲು ಇಷ್ಟಪಡುತ್ತೇನೆ. ಬೆಂಗಳೂರಿನ ಒಂದು ಫ್ಲೈಓವರ್
ಗಮನದಲ್ಲಿಟ್ಟುಕೊಂಡು ಬರೆದ ಕಥೆ ವಿಶ್ವದಾದ್ಯಂತ ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗಿರುವುದಕ್ಕೆ
ಖುಷಿ ಇದೆ. ಇದಕ್ಕೆ ಮುಖ್ಯ ಕಾರಣ ನಾನು ನನ್ನ ಸಿನಿಮಾವನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ
ಜನರಿಗೆ ತಲುಪಿಸಿದ್ದೇನೆ. ನಮ್ಮ ಸಿನಿಮಾದ ರೈಟ್ಸ್ ಅನ್ನು ಸಂಪೂರ್ಣವಾಗಿ ಒಂದೇ ಮಾಧ್ಯಮಕ್ಕೆ
ಕೊಡಬಾರದು. ಹಾಗೆ ಕೊಟ್ಟಾಗ ಎಲ್ಲರಿಗೂ ಸಿನಿಮಾ ತಲುಪಿಸಲು ಕಷ್ಟವಾಗುತ್ತದೆ. ಡಿಜಿಟಲ್, ಸ್ಯಾಟಲೈಟ್ ಹೀಗೆ ಬೇರೆ ಬೇರೆ ರೈಟ್‌ಗಳನ್ನು ಡಿವೈಡ್
ಮಾಡಿ ಕೊಟ್ಟ ಮೊದಲ ಸಿನಿಮಾ
ಯು ಟರ್ನ್' ಎನ್ನುತ್ತಾರೆ ಪವನ್‌ಕುಮಾರ್.



ಕಾಮೆಂಟ್‌ಗಳಿಲ್ಲ