US Election 2020 Polls : ಟ್ರಂಪ್ ಮತ್ತು ಬಿಡೆನ್ ನಡುವಿನ ಸೋಲು ಗೆಲುವಿನ ಲೆಕ್ಕಾಚಾರ
US Election 2020 Polls : ಟ್ರಂಪ್ ಮತ್ತು ಬಿಡೆನ್ ನಡುವಿನ ಸೋಲು ಗೆಲುವಿನ ಲೆಕ್ಕಾಚಾರ
![]() |
| source :google |
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಇನ್ನು 25 ದಿನಗಳಲ್ಲಿ ಜಗದ ಪಾಲಿನ ದೊಡ್ಡಣ್ಣ ಅಮೆರಿಕದ ಚುಕ್ಕಾಣಿ ಹಿಡಿಯೋರು ಯಾರು ಅನ್ನೋದು ನಿರ್ಧಾರವಾಗಲಿದೆ. ಆದರೆ ಅದಕ್ಕೂ ಮೊದಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಹಾಲಿ ಅಧ್ಯಕ್ಷ ಟ್ರಂಪ್ ಸೋಲಿಗೆ ಮುನ್ನುಡಿ ಬರೆಯುತ್ತಿವೆ. ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ನಡುವಿನ ರಾಜಕೀಯ ರಣರಂಗದಲ್ಲಿ ಬಿಡೆನ್ ಪರವಾಗಿಯೇ ಜನಾಭಿಪ್ರಾಯ ಮೂಡುತ್ತಿದ್ದು, ಸಮೀಕ್ಷೆಗಳ ಮಾಹಿತಿ ಪ್ರಕಾರ ಟ್ರಂಪ್‌ರನ್ನ ಬಿಡೆನ್ ಹಿಂದಿಕ್ಕಿದ್ದಾರೆ.
ಅಲ್ಲದೆ ಅಧ್ಯಕ್ಷೀಯ ಅಭ್ಯರ್ಥಿಯಾಗಿ ತಮ್ಮ ಮೊದಲೇ ಪ್ರಯತ್ನದಲ್ಲೇ
ಅಚ್ಚರಿಯ ಗೆಲುವು ಸಾಧಿಸುವ ಸುಳಿವನ್ನೂ ಬಿಡೆನ್ ನೀಡಿದ್ದಾರೆ. ಕೊರೊನಾ ಸಂಕಷ್ಟ, ಅಮೆರಿಕದ ಆರ್ಥಿಕತೆ
ಕುಸಿತ, ಜನಾಂಗೀಯ ಘರ್ಷಣೆ, ಬಾಯಿಗೆ ಬಂದಂತೆ
ವಿಜ್ಞಾನದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದೇ ಟ್ರಂಪ್‌ಗೆ ಮುಳುವಾಗುತ್ತಿದೆ ಎಂಬುದು
ತಜ್ಞರ ಅಭಿಪ್ರಾಯವಾಗಿದೆ.
ತಜ್ಞರ ಮಾತುಗಳಿಗೆ ಪುಷ್ಟಿ ನೀಡುವಂತೆ ಕಳೆದ ಚುನಾವಣೆಯಲ್ಲಿ ಟ್ರಂಪ್
ಗೆದ್ದುಬೀಗಿದ್ದ ರಾಜ್ಯಗಳಲ್ಲೇ ಅವರಿಗೆ ಬಾರಿ ಹಿನ್ನಡೆ ಉಂಟಾಗಿದೆ. ಅದರಲ್ಲೂ ಅಧ್ಯಕ್ಷರ
ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಜ್ಯಗಳಲ್ಲೇ ಈ ಬಾರಿ ಟ್ರಂಪ್ ಮುಗ್ಗರಿಸುವ ಮುನ್ಸೂಚನೆ
ಸಿಕ್ಕಿದೆ. ಹಾಗಾದ್ರೆ ಯಾವಾ ಯಾವ ರಾಜ್ಯದಲ್ಲಿ ಟ್ರಂಪ್ ಮತ್ತು ಬಿಡೆನ್ ಹವಾ ಎಷ್ಟರಮಟ್ಟಿಗೆ ಇದೆ
ಅನ್ನೋದರ ಅಂಕಿ-ಅಂಶ ನೋಡೋದಾದ್ರೆ.
ಅಂದಹಾಗೆ ಚುನಾವಣಾ ಪೂರ್ವ ಸಮೀಕ್ಷೆಗಳನ್ನ ನೋಡಿದ ತಕ್ಷಣ ಬಿಡೆನ್
ಗೆದ್ದು ಬೀಗಲಿದ್ದಾರೆ ಎಂಬುದನ್ನು ಕನ್ಫರ್ಮ್ ಮಾಡಲು ಆಗುವುದಿಲ್ಲ. ಏಕೆಂದರೆ ಸಮೀಕ್ಷೆಗಳಲ್ಲಿ
ಗೆದ್ದು ಬೀಗಿದ್ದವರು ಚುನಾವಣೆಯಲ್ಲೂ ಹೀಗೆ ಮತ ಗಳಿಸುತ್ತಾರೆ ಎಂದು ಹೇಳಲು ಆಗುವುದಿಲ್ಲ.
ಇದಕ್ಕೆ ಅಮೆರಿಕದ ಚುನಾವಣಾ ಇತಿಹಾಸದಲ್ಲೂ ಹತ್ತಾರು ಉದಾಹರಣೆಗಳು ಸಿಗುತ್ತವೆ. ಏಕೆಂದರೆ
ಅಮೆರಿಕದಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿ ಇಲ್ಲ. ಹೀಗೆ ಪ್ರಜೆಗಳು
ನೇರವಾಗಿ ತಮ್ಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಪರೋಕ್ಷ ಮತದಾನದ ಮೂಲಕ ಅಧ್ಯಕ್ಷರನ್ನು
ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ನಮ್ಮ ವ್ಯವಸ್ಥೆಯಲ್ಲಿ ಪ್ರಧಾನಿ ಆಯ್ಕೆ ಮಾಡುವ ರೀತಿ.
ನಾವೆಲ್ಲರೂ ಸಂಸದರನ್ನು ಆಯ್ಕೆ ಮಾಡುತ್ತೇವೆ, ನಂತರ ಅದೇ ಸಂಸದರು ಪ್ರಧಾನಿ ಹುದ್ದೆಗೆ ಯಾರು ಸೂಕ್ತ
ಎಂಬುದನ್ನು ಪರಿಗಣಿಸಿ ಆರಿಸುತ್ತಾರೆ. ಹೀಗಾಗಿ ತಕ್ಷಣಕ್ಕೆ ಬಿಡೆನ್ ಗೆದ್ದರು ಎನ್ನಲು ಆಗದು.
ಯಾಕಂದ್ರೆ ಇದು ಜಸ್ಟ್ ಟ್ರೇಲರ್ ಅಷ್ಟೇ, ಮುಂದೆ ಇನ್ನೂ ಮೂವಿ ಬಾಕಿ ಇದೆ.
244 ವರ್ಷಗಳ ಇತಿಹಾಸ..
ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಹೇಳಿಕೊಟ್ಟಿದ್ದು ಯುರೋಪಿಯನ್ನರು. ಆದರೆ ಅದೇ ಪ್ರಜಾಪ್ರಭುತ್ವವನ್ನು ಆಧುನಿಕ ಜಗತ್ತಿನಲ್ಲಿ ಎತ್ತಿಹಿಡಿದಿದ್ದು ಅಮೆರಿಕ. ಜಾರ್ಜ್ ವಾಷಿಂಗ್‌ಟನ್, ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಒಬಾಮಾ ಹೀಗೆ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯುವವರೆಗೂ 45 ಅಧ್ಯಕ್ಷರನ್ನ ಅಮೆರಿಕ ಕಂಡಿದೆ. ಅಮೆರಿಕ ಪ್ರಜಾಪ್ರಭುತ್ವ ಇತಿಹಾಸಕ್ಕೆ 244 ವರ್ಷ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ಯಾವುದೇ ರಾಷ್ಟ್ರ ಕೂಡ ಈ ವಿಚಾರದಲ್ಲಿ ಅಮೆರಿಕವನ್ನು ಹಿಂದೆ ಹಾಕಲು ಸಾಧ್ಯವಾಗಿಲ್ಲ.
ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..?
ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗುವವರು ಅಲ್ಲೇ ಹುಟ್ಟಿರಬೇಕು, ಅಮೆರಿಕದ ಪ್ರಜೆಯಾಗಿರಬೇಕು. ಅಲ್ಲದೆ ಅಭ್ಯರ್ಥಿಯಾಗಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಮೆರಿಕ ಅಧ್ಯಕ್ಷರ ಆಯ್ಕೆ ಸುಲಭದ ವಿಚಾರವಲ್ಲ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸುದೀರ್ಘವಾಗಿದ್ದು, ನವೆಂಬರ್‌ನಲ್ಲೇ ಮತದಾನ ನಡೆದರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ಶುರುವಾಗುವುದು ಜನವರಿಯಲ್ಲಿ. ಹೀಗೆ ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಮಾಡಲು ಹಲವು ತಿಂಗಳ ಸಮಯ ಬೇಕಾಗುತ್ತದೆ.
ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..? ಅಮೆರಿಕ ಸಂವಿಧಾನದ
ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗುವವರು ಅಲ್ಲೇ ಹುಟ್ಟಿರಬೇಕು, ಅಮೆರಿಕದ
ಪ್ರಜೆಯಾಗಿರಬೇಕು. ಅಲ್ಲದೆ ಅಭ್ಯರ್ಥಿಯಾಗಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಮೆರಿಕ ಅಧ್ಯಕ್ಷರ ಆಯ್ಕೆ
ಸುಲಭದ ವಿಚಾರವಲ್ಲ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸುದೀರ್ಘವಾಗಿದ್ದು, ನವೆಂಬರ್‌ನಲ್ಲೇ
ಮತದಾನ ನಡೆದರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ಶುರುವಾಗುವುದು
ಜನವರಿಯಲ್ಲಿ. ಹೀಗೆ ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಮಾಡಲು ಹಲವು ತಿಂಗಳ ಸಮಯ ಬೇಕಾಗುತ್ತದೆ.



ಕಾಮೆಂಟ್‌ಗಳಿಲ್ಲ