IPL 2020 CSK vs RCB: ಚೆನ್ನೈ ಎದುರು ಕೊಹ್ಲಿಯ ವಿರಾಟ ಪ್ರದರ್ಶನ
IPL 2020, CSK vs RCB: ಚೆನ್ನೈ ಎದುರು ಕೊಹ್ಲಿಯ ವಿರಾಟ ಪ್ರದರ್ಶನ

source : google
IPL 2020, Chennai vs Bangalore: ಐಪಿಎಲ್ನಲ್ಲಿ ಈವರೆಗೆ ಉಭಯ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
ದುಬೈ (ಅ. 10): 13ನೇ ಆವೃತ್ತಿಯ ಐಪಿಎಲ್ನ 25ನೇ ಪಂದ್ಯ ಇಲ್ಲಿನ ದುಬೈ ಅಂತರಾಷ್ಟ್ರೀಯ
ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್
ಬೆಂಗಳೂರು ತಂಡ ಸವಾಲಿನ ಮೊತ್ತ ಕಲೆಹಾಕಿದೆ. ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದ
ನೆರವಿನಿಂದ ಆರ್ಸಿಬಿ 20 ಓವರ್ನಲ್ಲಿ 156 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಆರ್ಸಿಬಿ ಆರಂಭದಲ್ಲೇ
ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದೀಪಕ್ ಚಹಾರ್ ಬೌಲಿಂಗ್ನಲ್ಲಿ
ಫಿಂಚ್(2) ಬೌಲ್ಡ್ ಆದರು.
ಆದರೆ, ಎರಡನೇ ವಿಕೆಟ್ಗೆ
ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆಟ ಪ್ರದರ್ಶಿಸಿದರು.
ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು. ಆದರೆ, 11ನೇ ಓವರ್ನಲ್ಲಿ
ಪಡಿಕ್ಕಲ್ 34 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ
ಔಟ್ ಆಗಿ ಶಾಕ್ ನೀಡಿದರು. ಬಂದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಶೂನ್ಯಕ್ಕೆ ಔಟ್ ಆಗಿದ್ದು
ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ವಾಷಿಂಗ್ಟನ್ ಸುಂದರ್ 10 ರನ್ಗೆ ಬ್ಯಾಟ್
ಕೆಳಗಿಟ್ಟರು.
ಈ ನಡುವೆ ವಿರಾಟ್ ಕೊಹ್ಲಿ ತಂಡದ ರನ್ ಗತಿಯನ್ನ ಏರಿಸಲು ಶ್ರಮಿಸಿದರು.
ಕೊನೆಯ ಹಂತದಲ್ಲಿ ಶಿವಂ ದುಬೆ ಜೊತೆಯಾಗಿ ವಿರಾಟ ಪ್ರದರ್ಶನ ತೋರಿದ ಕೊಹ್ಲಿ ಅರ್ಧಶತಕ ಸಿಡಿಸಿ
ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಕೊಹ್ಲಿ 52 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 90 ರನ್ ಚಚ್ಚಿದರು. ಶಿವಂ ದುಬೆ 14 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು. ಕೊನೆಯ 5 ಓವರ್ನಲ್ಲಿ ಬರೋಬ್ಬರಿ 74 ರನ್ಗಳು ಹರಿದುಬಂದವು.
ಅಂತಿಮವಾಗಿ ಆರ್ಸಿಬಿ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು. ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ವಿಕೆಟ್ ಕಿತ್ತರೆ, ಸ್ಯಾಮ್ ಕುರ್ರನ್ ಹಾಗೂ ದೀಪಕ್ ಚಹಾರ್ ತಲಾ 1 ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಶಿವಂ ದುಬೆ, ಗುರುಕೀರತ್ ಮನ್ ಸಿಂಗ್, ಕ್ರಿಸ್ ಮೊರೀಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಯಜುವೇಂದ್ರ ಚಾಹಲ್.
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಫಾಪ್ ಡುಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್ ಧೋನಿ
(ನಾಯಕ, ವಿಕೆಟ್ ಕೀಪರ್), ಎನ್. ಜಗದೀಶನ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಕರ್ಣ್ ಶರ್ಮಾ.


ಕಾಮೆಂಟ್‌ಗಳಿಲ್ಲ