SRH Vs KXIP IPL 2020 : ರೋಮಾಂಚಕ ಪಂದದಲ್ಲಿ ಜಯ ಪಡೆದ ಪಂಜಾಬ್
SRH Vs KXIP IPL 2020 : ರೋಮಾಂಚಕ ಪಂದದಲ್ಲಿ ಜಯ ಪಡೆದ ಪಂಜಾಬ್
IPL 2020, KXIP vs SRH: ಕಳೆದ ಪಂದ್ಯದಲ್ಲಿ ಆಡಿದಂತೆ ಎಚ್ಚರಿಕೆಯ ಆಟ ಪ್ರದರ್ಶಿಸಿದ
ಪಾಂಡೆ-ಶಂಕರ್ ತಂಡಕ್ಕೆ ಗೆಲುವು ತಂದುಕೊಡಲಿದ್ದಾರೆಂದೇ ನಂಬಲಾಗಿತ್ತು. ಆದರೆ, 17ನೇ ಓವರ್ನಲ್ಲಿ ಸಿಕ್ಸ್ ಸಿಡಿಸುವಲ್ಲಿ ವಿಫಲರಾದ
ಪಾಂಡೆ 15 ರನ್ಗೆ ಔಟ್
ಆದರು.
ದುಬೈ (ಅ. 24): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್ಗಳ ಜಯ ಸಾಧಿಸಿದೆ. ಗೆಲುವಿನ ಸನಿಹದಲ್ಲಿ ಎಡವಿದ ವಾರ್ನರ್ ಪಡೆ ಈ ಸೋಲಿನೊಂದಿಗೆ ಪ್ಲೇ ಆಫ್ ಹಾದಿ ಕಠಿಣವಾಗಿದೆ.
ಪಂಜಾಬ್ ನೀಡಿದ್ದ 127 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಹೈದರಾಬಾದ್ ಸ್ಫೋಟಕ
ಆರಂಭ ಪಡೆದುಕೊಂಡಿತು. ಓಪನರ್ಗಳಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋ ಪವರ್ ಪ್ಲೇ
ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡರು. ಮೊದಲ 6 ಓವರ್ನಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು.
ಆದರೆ, ಪವರ್ ಪ್ಲೇ ಮುಗಿದ ಬೆನ್ನಲ್ಲೇ 20 ಎಸೆತಗಳಲ್ಲಿ 35 ರನ್ ಗಳಿಸಿದ್ದ ವಾರ್ನರ್ ಔಟ್ ಆದರೆ, ಬೈರ್ಸ್ಟೋ 19 ರನ್ಗೆ ನಿರ್ಗಮಿಸಿದರು. ಅಬ್ದುಲ್ ಸಮದ್(7) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಈ
ಸಂದರ್ಭ ಒಂದಾದ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ತಂಡದ ಗೆಲುವಿಗೆ ಹೋರಾಟ ನಡೆಸಿದರು.
ಕಳೆದ ಪಂದ್ಯದಲ್ಲಿ ಆಡಿದಂತೆ ಎಚ್ಚರಿಕೆಯ ಆಟ ಪ್ರದರ್ಶಿಸಿದ ಪಾಂಡೆ-ಶಂಕರ್ ತಂಡಕ್ಕೆ ಗೆಲುವು ತಂದುಕೊಡಲಿದ್ದಾರೆಂದೇ ನಂಬಲಾಗಿತ್ತು. ಆದರೆ, 17ನೇ ಓವರ್ನಲ್ಲಿ ಸಿಕ್ಸ್ ಸಿಡಿಸುವಲ್ಲಿ ವಿಫಲರಾದ ಪಾಂಡೆ 15 ರನ್ಗೆ ಔಟ್ ಆದರು. ಶಂಕರ್ 27 ಎಸೆತಗಳಲ್ಲಿ 26 ಗಳಿಸಿ ನಿರ್ಗಮಿಸಿದರು.
ಕೊನೆ ಹಂತದಲ್ಲಿ ಜೇಸನ್ ಹೋಲ್ಡರ್(5) ಕೂಡ ನಿರ್ಗಮಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು. ಬಳಿಕ ಬಂದ ಬ್ಯಾಟ್ಸ್ಮನ್ಗಳು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಹೈದರಾಬಾದ್ 19.5 ಓವರ್ನಲ್ಲಿ 114 ರನ್ಗೆ ಆಲೌಟ್ ಆಯಿತು. ಪಂಜಾಬ್ ಪರ ಕ್ರಿಸ್ ಜೋರ್ಡನ್ 3 ವಿಕೆಟ್ ಕಿತ್ತರೆ ಹಾಗೂ ಅರ್ಶ್ದೀಪ್ ಸಿಂಗ್ 3, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್ ಹಾಗೂ ರವಿ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ ತಂಡ ನಿಧಾನಗತಿಯ ಆರಂಭ ಪಡೆದುಕೊಂಡಿತು.ಅಗರ್ವಾಲ್
ಅನುಪಸ್ಥಿತಿಯಲ್ಲಿ ಕೆ. ಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಮಂದೀಪ್ ಸಿಂಗ್ ಸಿಕ್ಕ
ಅವಕಾಶವನ್ನು ಉಪಯೋಗಿಸಿಕೊಳ್ಳಲಿಲ್ಲ. 14 ಎಸೆತಗಳಲ್ಲಿ 17 ರನ್ ಗಳಿಸಿ ಔಟ್ ಆದರು.



ಕಾಮೆಂಟ್‌ಗಳಿಲ್ಲ