Breaking News

BRICS : ಭಯೋತ್ಪಾದನೆಗೆ ಬೆಂಬಲಿಸುವ ರಾಷ್ತ್ರಗಳೆ ತಪ್ಪಿತಸ್ಥರು : ಪ್ರಾಧಾನಿ ಮೋದಿ

 

BRICS : ಭಯೋತ್ಪಾದನೆಗೆ ಬೆಂಬಲಿಸುವ ರಾಷ್ತ್ರಗಳೆ ತಪ್ಪಿತಸ್ಥರು : ಪ್ರಾಧಾನಿ ಮೋದಿ

image : google

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವ ವ್ಯಾಪಾರ ಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿಯನ್ನು ಸುಧಾರಿಸುವ ಅಗತ್ಯವಿದೆ-ಮೋದಿ

ನವದೆಹಲಿ (ನ.17) ಭಯೋತ್ಪಾದನೆ ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ನೆರೆಯ ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತನಾಡಿದ ಅವರು ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ಸಹಾಯ ಮಾಡುವ ದೇಶಗಳನ್ನು ತಪ್ಪಿತಸ್ಥರೆಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ  ತಿಳಿಸಿದರು ಬ್ರಿಕ್ಸ್​ ಶೃಂಗಸಭೆಯಲ್ಲಿ ವರ್ಚುಯಲ್​ ಮೂಲಕ ಭಾಷಣ ಮಾಡಿದ ಅವರು, ಭಯೋತ್ಪಾದನೆಯೆಂಬ ಸಮಸ್ಯೆಯನ್ನು ಸಂಘಟಿತವಾಗಿ ನಿಭಾಯಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆಯೋಜಿಸಿದ್ದ 12ನೇ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​. ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಾಫೋಸಾ ಭಾಗಿಯಾಗಿದ್ದರು.

ಇದೇ ವೇಳೆ ಅವರು ತಮ್ಮ ಸರ್ಕಾರದ ಆತ್ಮ ನಿರ್ಭರ್​ ಭಾರತ್​ ಅಭಿಯಾನವು ಸಮಗ್ರ ಸುಧಾರಣಾ ಪ್ರಕ್ರಿಯೆ ಹುಟ್ಟುಹಾಕಲಿದೆ ಎಂದು ಸರ್ಕಾರ ತೆಗೆದುಕೊಂಡಿರುವ ಸುಧಾರಣಾ ಕ್ರಮಗಳನ್ನು ಅವರು ತಿಳಿಸಿದರು.

ಸ್ವಾವಲಂಬಿ ಭಾರತ ಅಭಿಯಾನದಡಿ ಸಮಗ್ರ ಸುಧಾರಾಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಈ ಅಭಿಯಾನ ಕೋವಿಡ್​ ನಂತರ ಭಾರತ ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಜಾಗತಿಕ ಆರ್ಥಿಕ ಶಕ್ತಿಗೆ ಬಲ ನೀಡುತ್ತದೆ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರುಇದೇ ವೇಳೆ ವಿಶ್ವಸಂಸ್ಥೆಯ ಸುಧಾರಣೆ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವ ವ್ಯಾಪಾರ ಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿಯನ್ನು ಸುಧಾರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಮುಂದಿನ ವರ್ಷ ಭಾರತದ ಅತಿಥ್ಯ

 ಬ್ರೆಜಿಲ್​, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ಅಂತರರಾಷ್ಟ್ರೀಯ ವೇದಿಕೆ ಬ್ರಿಕ್ಸ್​ ಆಗಿದ್ದು, ಪ್ರತಿವರ್ಷ ಈ ವೇದಿಕೆ ಮೂಲಕ ಐದು ರಾಷ್ಟ್ರಗಳು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚಿಸುತ್ತವೆ. ಜುಲೈನಲ್ಲಿ ನಡೆಯಬೇಕಿದ್ದ ಈ ಶೃಂಗಸಭೆ ಕೋವಿಡ್​ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಇನ್ನು 2021ನೇ ಬ್ರಿಕ್ಸ್​ ಸಭೆಯ ಅತಿಥ್ಯವನ್ನು ಭಾರತ ನಿರ್ವಹಿಸಲಿದ್ದು, ಈ ಕುರಿತು ಮಾತನಾಡಿದ ಪ್ರಧಾನಿ, ಬ್ರಿಕ್ಸ್​ನ ಮೂರು ಸ್ತಂಭಗಳಲ್ಲಿ ಸಹಕಾರವನ್ನು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕಾಮೆಂಟ್‌ಗಳಿಲ್ಲ