Pfizer: ಕೊರೋನಾಗೆ ಫಿಜರ್ ಪರಿಣಾಮಕಾರಿ ಲಸಿಕೆ; ಅನುಮೋದನೆ ಪಡೆಯಲು ಸಿದ್ಧತೆ
Pfizer: ಕೊರೋನಾಗೆ ಫಿಜರ್ ಪರಿಣಾಮಕಾರಿ ಲಸಿಕೆ; ಅನುಮೋದನೆ ಪಡೆಯಲು ಸಿದ್ಧತೆ
![]() |
| imge:google |
ಜರ್ಮನ್
ಪಾಲುದಾರಿಕೆಯಲ್ಲಿ ಈ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದು, ಇದು ಪರಿಣಾಮಕಾರಿಯಾಗಿದೆ, ಇದು ಯಾವುದೇ ಅಡ್ಡಪರಿಣಾಮವಿಲ್ಲದೇ ಬಳಸಬಹುದಾಗಿದೆ
ಬಯೋನ್ ಟೆಕ್
ಕಂಪನಿ ತಯಾರಿಸಿರುವ ಫಿಜರ್ ಕೋವಿಡ್-19 ಲಸಿಕೆಯ ಸಂಪೂರ್ಣ
ಪ್ರಯೋಗಿಕ ಅಧ್ಯಯನ ನಡೆಸಿದ್ದು, ಇದು ಶೇ 95 ರಷ್ಟು ಪರಿಣಾಮಕಾರಿಯಾಗಿದೆ ಎಂದು ತೋರಿಸಿದೆ. ಅಲ್ಲದೇ
ಲಸಿಕೆಯ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಕೆಲವೇ ದಿನಗಳಲ್ಲಿ ಲಸಿಕೆಯ ತುರ್ತು ಬಳಕೆಯ
ದೃಢೀಕರಣಕ್ಕೆ ಅಮೆರಿಕ ನಿಯಂತ್ರಕರಿಗೆ ಅರ್ಜಿ ಸಲ್ಲಿಸುವುದಾಗಿ ಕಂಪನಿ ತಿಳಿಸಿದೆ. ಈ ಕುರಿತು
ಮಾತನಾಡಿರುವ ಅಮೆರಿಕ ಮೂಲದ ಫಿಜರ್ ಸಂಸ್ಥೆ ಸಿಇಒ ಆಲ್ಬರ್ಟ್ ಬೌರ್ಲಾ, ಕಳೆದ ಎಂಟು ತಿಂಗಳಿನಿಂದ ಕೊರೋನಾ ವಿರುದ್ಧದ ಹೋರಾಟದ
ಪ್ರಮುಖ ಹೆಜ್ಜೆ ಇದಾಗಿದ್ದು, ಈ ಸೋಂಕನ್ನು
ಶೀಘ್ರದಲ್ಲಿಯೇ ಅಂತ್ಯಗೊಳಿಸಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. ಜರ್ಮನ್ ಪಾಲುದಾರಿಕೆಯಲ್ಲಿ
ಈ ಲಸಿಕೆ ಅಭಿವೃದ್ಧಿ ಪಡಿಸಲಾಗಿದ್ದು, ಇದು
ಪರಿಣಾಮಕಾರಿಯಾಗಿದೆ, ಇದು ಯಾವುದೇ
ಅಡ್ಡಪರಿಣಾಮವಿಲ್ಲದೇ ಬಳಸಬಹುದಾಗಿದೆ. 65 ವರ್ಷ
ಮೇಲ್ಪಟ್ಟವರಲ್ಲಿ ಈ ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೇ 94ರಷ್ಟು ಪರಿಣಾಮಕಾರಿಯಾಗಿ ಇದು ಕಾರ್ಯನಿರ್ವಹಿಸಲಿದ್ದಾರೆ ಎಂದು
ತಿಳಿಸಿದರು.
ಪ್ರಯೋಗಿಕ ಪ್ರಯೋಗದ
ಫಲಿತಾಂಶದಲ್ಲಿ ಲಸಿಕೆ ಶೇ 20 ರಷ್ಟು ಹೆಚ್ಚು
ಪರಿಣಾಮಕಾರಿ ಎಂದು ತೋರಿಸಿದ ವಾರದೊಳಗೆ ಈ ಕುರಿತು ಅಂತಿಮ ವಿಶ್ಲೇಷಣೆಗೆ ಬರಲಾಗುವುದು.
ಮೆಸೆಂಜರ್ ಆರ್ಎನ್ಎ ಎಂದು ಪರಿಚಿತವಾಗಿರುವ ಹೊಸ ತಂತ್ರಜ್ಞಾಮದೊಂದಿಗೆ ಅಭಿವೃದ್ಧಿಪಡಿಸಿದ
ಎರಡು ಲಸಿಕೆಗಳಿಂದ ಉತ್ತಮ ವರದಿ ನೀರಿಕ್ಷಿಸಲಾಗಿದ್ದು, ಇದು ಕೂಡ ಸೋಂಕನ್ನು ಕೊನೆಗೊಳಿಸುವ ಭರವಸೆ ಮೂಡಿಸಿದೆ.
ಇನ್ನು ಈ
ಲಸಿಕೆಯನ್ನು ಭಾರತದ ಬಳಕೆಗೆ ನಿರಾಕರಿಸಲಾಗಿದೆ. ಕಾರಣ ಇದನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ
ಸಂಗ್ರಹಿಸಿಡಬೇಕು. ಇದು ಭಾರತದಲ್ಲಿ ದೊಡ್ಡ ಸವಾಲ್ಆಗಿದೆ. ಈ ಹಿನ್ನಲೆ ಈ ಸಾಧ್ಯತೆಗಳನ್ನು
ಪರಿಶೀಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್ 19 ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥರಾಗಿರುವ ಡಾ. ವಿಕೆ ಕೇಲ್ ಈ ಕುರಿತು ಮಾತನಾಡಿದ್ದು, ಭಾರತೀಯ ಜನಸಂಖ್ಯೆಗೆ ಅಗತ್ಯವಿರುವಷ್ಟು ಪ್ರಮಾಂದ ಫಿಜರ್ ಲಸಿಕೆ ಲಭ್ಯವಿಲ್ಲ. ಆದರೆ, ಸರ್ಕಾರವೂ ಈ ಕುತಿತ ಸಾಧ್ಯತೆಗಳನ್ನು ಪರಿಈಶಲಿಸಿ, ನಿಯಂತ್ರಕರ ಅನುಮೋದನೆಗಳನ್ನು ಪಡೆದು ಅದರ ಸಂಗ್ರಹಣೆ ಮತ್ತು ವಿತರಣೆಗೆ ಕಾರ್ಯತಂತ್ರ ರೂಪಿಸುತ್ತದೆ ಎಂದಿದ್ದಾರೆ.
ಇದನ್ನು ಶೇಖರಿಸಲು
ಮೈನಸ್ 70 ಡಿಗ್ರಿ
ಸೆಲ್ಸಿಯಸ್ ಕಡಿಮೆ ತಾಪಮಾನದಲ್ಲಿ ಲಸಿಕೆ ಸಂಗ್ರಹಿಸಲು ಕೋಲ್ಡ್ ಚೈನ್ಗಳ ವ್ಯವಸ್ಥೆ
ನಿರ್ಮಿಸುವುದು ಕೂಡ ಸವಾಲ್ ಆಗಿದೆ. ಇದನ್ನು ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸುವ
ಕುರಿತು ಕಾರ್ಯತಂತ್ರ ರಚಿಸಲಾಗುವುದು ಎಂದರು


ಕಾಮೆಂಟ್‌ಗಳಿಲ್ಲ