Badavara Bandhu - ಬಡವರ ಬಂಧು ಯೋಜನೆ ಗೆ ಚಾಲನೆ: ಬಡ್ಡಿ ಇಲ್ಲದೆ ಸಾಲ
Badavara Banadhu -ಬಡವರ ಬಂಧು ಯೋಜನೆ ಗೆ ಚಾಲನೆ: ಬಡ್ಡಿ ಇಲ್ಲದೆ ಸಾಲ
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕಿರು ಸಾಲ ವಿತರಿಸುವ ರಾಜ್ಯ ಸರಕಾರದ
'ಬಡವರ ಬಂಧು' ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ.
ಬೆಂಗಳೂರು: ನಗರ
ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಶೂನ್ಯ
ಬಡ್ಡಿ ದರದಲ್ಲಿ ಕಿರು ಸಾಲ ವಿತರಿಸುವ ರಾಜ್ಯ ಸರಕಾರದ 'ಬಡವರ ಬಂಧು' ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ.
ಈ ಯೋಜನೆಯನ್ನು ನಗರ
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದ್ದು, ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು ಸೌಲಭ್ಯ
ಪಡೆಯಬಹುದಾಗಿದೆ. ವ್ಯಾಪಾರಿಗಳು ಡಿಸಿಸಿ ಬ್ಯಾಂಕ್‌ಗಳು, ಮಹಿಳಾ ಸಹಕಾರಿ ಬ್ಯಾಂಕ್‌ಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬಹುದಾಗಿದೆ.
ಈ ಸಂಬಂಧ ಸಹಕಾರ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯಾಕಾರಿ ಕೆ.ಎಂ.
ಆಶಾ ಆದೇಶ ಹೊರಡಿಸಿದ್ದಾರೆ.
ಅರ್ಹ ಫಲಾನುಭವಿಗಳು ಯಾರು?
ರಸ್ತೆ ಬದಿಯಲ್ಲಿ
ತಳ್ಳುಬಂಡಿ, ಆಟೊಗಳಲ್ಲಿ ತಿಂಡಿ,
ಊಟ ಹಾಗೂ ಪಾನೀಯ
ಪದಾರ್ಥಗಳನ್ನು ಮಾರಾಟ ಮಾಡುವವರು ಮತ್ತು ಮನೆಗಳ ಬಳಿ ತೆರಳಿ ತರಕಾರಿ, ಹೂ, ಕಾಯಿ ಮಾರುವವರು ಮತ್ತು ರಸ್ತೆ ಬದಿಯಲ್ಲಿ ಬುಟ್ಟಿ ವ್ಯಾಪಾರಿಗಳು ಈ
ಸಾಲ ಸೌಲಭ್ಯ ಪಡೆಯಬಹುದು. ಪಾದರಕ್ಷೆಗಳು, ಚರ್ಮ ಉತ್ಪನ್ನಗಳ ರಿಪೇರಿ ಹಾಗೂ ಮಾರಾಟ ಮಾಡುವವರು ಮತ್ತು ಆಟದ
ಸಾಮಾನು, ಇತರೆ ಗೃಹಪಯೋಗಿ
ವಸ್ತುಗಳನ್ನು ಮಾರಾಟ ಮಾಡುವವರು ಈ ಯೋಜನೆಗೊಳಪಡುತ್ತಾರೆ.
ಸಾಲ ಪಡೆಯವುದು ಹೇಗೆ?
ನೋಂದಾಯಿತ ಬೀದಿ
ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು
ಸಹಕಾರಿ ಬ್ಯಾಂಕ್‌ಗಳಲ್ಲಿ ಶೂನ್ಯ ಉಳಿತಾಯ ಖಾತೆ ತೆರೆಯಬೇಕು. ಬಳಿಕ ತಮ್ಮ ಆಧಾರ್ ಕಾರ್ಡ್,
ಬಿಪಿಎಲ್ ಕಾರ್ಡ್,
ವ್ಯಾಪಾರ ನಡೆಸುತ್ತಿರುವ
ಸ್ಥಳದ ಪೋಟೊ ಮತ್ತು ಸ್ಥಳೀಯ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿಯ ಜತೆ ಸಹಕಾರಿ ಬ್ಯಾಂಕ್‌ಗಳು
ನಿಗದಿಪಡಿಸಿದ ಅರ್ಜಿಯನ್ನು ಆಯಾ ಬ್ಯಾಂಕಿನ ಮೊಬೈಲ್ ಘಟಕ(ಶಾಖೆ)ಕ್ಕೆ ಸಲ್ಲಿಸಬೇಕು.
3 ರಿಂದ 10 ಸಾವಿರದವರೆಗೆ ಸಾಲ
ಫಲಾನುಭವಿಗಳ
ವ್ಯಾಪಾರಕ್ಕೆ ಅನುಗುಣವಾಗಿ ಮೂರು ಸಾವಿರದಿಂದ 10 ಸಾವಿರ ರೂ.ವರೆಗೆ ಸಾಲ ನೀಡಬಹುದು. ಹಂತ- ಹಂತವಾಗಿ ಸಾಲವನ್ನು ರೂಪೇ
ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ವಿತರಿಸಬೇಕಾಗುತ್ತದೆ. ಸಾಲದ ಮರುಪಾವತಿ ಅವಯು ಆರು ತಿಂಗಳು
ಒಳಗೊಂಡಿರುತ್ತದೆ. ಈ ಅವಯೊಳಗೆ ಫಲಾನುಭವಿಗಳು ಎಷ್ಟು ಬಾರಿಯಾದರೂ ಹಣ ಡ್ರಾ ಮಾಡಬಹುದು ಅಥವಾ ಜಮೆ
ಮಾಡಬಹುದು. ಆರು ತಿಂಗಳ ಅವಯಲ್ಲಿ ಬ್ಯಾಂಕ್‌ಗಳು ಯಾವುದೇ ಬಡ್ಡಿ ವಿಸುವಂತಿಲ್ಲ. ಫಲಾನುಭವಿಗಳ
ದೈನಂದಿನ ಚಾಲ್ತಿ ಬ್ಯಾಲೆನ್ಸ್ ಆಧಾರವಾಗಿ ಸರಕಾರದಿಂದ ಮೂರು ತ್ರೈಮಾಸಿಕವಾಗಿ ಶೇ. 10 ರಷ್ಟು ಬಡ್ಡಿ ಸಹಾಯಧನ ನೀಡಲಾಗುತ್ತದೆ. ಪೂರ್ತಿ ಸಾಲ
ಮರುಪಾವತಿ ಮಾಡಿದವರು ಪುನಃ ಸಾಲ ಪಡೆಯಬಹುದು ಅಥವಾ ಶೇ. 10ರ ಮಿತಿಯೊಳಗೆ ಸಾಲದ ಮೊತ್ತವನ್ನು ಹೆಚ್ಚಿಗೆ
ಪಡೆಯಬಹುದು.



ಕಾಮೆಂಟ್‌ಗಳಿಲ್ಲ