Mahesh Babu : ದಾಖಲೆ ಬರೆದ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ'
Mahesh Babu : ದಾಖಲೆ ಬರೆದ ಮಹೇಶ್ ಬಾಬು ನಟನೆಯ
'ಸರ್ಕಾರು ವಾರಿ ಪಾಟ'
![]() |
| source : google |
'ಸರಿಲೇರು
ನೀಕೆವ್ವರು' ಚಿತ್ರದಿಂದ ಭರ್ಜರಿ
ಯಶಸ್ಸನ್ನು ಪಡೆದುಕೊಂಡಿರುವ ನಟ 'ಪ್ರಿನ್ಸ್'
ಮಹೇಶ್ ಬಾಬು, ಮುಂದಿನ ಚಿತ್ರದ ಮೇಲೆ ತುಂಬ ನಿರೀಕ್ಷೆ
ಇಟ್ಟುಕೊಂಡಿದ್ದಾರೆ. ಈಗಾಗಲೇ ಅವರ ಮುಂದಿನ ಸಿನಿಮಾವಾಗಿ 'ಸರ್ಕಾರು ವಾರಿ ಪಾಟ' ಘೋಷಣೆ ಆಗಿದ್ದು, ಫಸ್ಟ್‌ಲುಕ್ ಕೂಡ ರಿಲೀಸ್ ಆಗಿದೆ. ಕೊರೊನಾ ಕಾರಣದಿಂದ
ಚಿತ್ರೀಕರಣ ಮುಂದೂಡಿದ್ದ ತಂಡ, ಈಗ ಶೂಟಿಂಗ್ ಮಾಡಲು
ಸಕಲ ಸಿದ್ಧತೆ ಮಾಡಿಕೊಂಡಿದೆ. ಅಚ್ಚರಿ ಎಂದರೆ, ಇನ್ನೂ ಚಿತ್ರೀಕರಣವೇ ಆರಂಭಗೊಳ್ಳದ ಸಿನಿಮಾದ ಸ್ಯಾಟಲೈಟ್ ಮತ್ತು
ಡಿಜಿಟಲ್ ಹಕ್ಕುಗಳಿಗೆ ಬೇಡಿಕೆ ಇದ್ದು, ಈಗಾಗಲೇ ಭಾರಿ
ಮೊತ್ತಕ್ಕೆ ಬಿಕರಿಯಾಗಿವೆ ಎನ್ನುತ್ತವೆ ಮೂ35 ಕೋಟಿ ರೂ.ಗೆ ಸೇಲ್!
'ಸರ್ಕಾರು ವಾರು ಪಾಟ' ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು 35 ಕೋಟಿ ರೂ.ಗಳಿಗೆ ಮಾರಾಟವಾಗಿವೆ ಎಂಬ ಮಾಹಿತಿ ಕೇಳಿಬಂದಿದೆ. ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ಮುಗಿಸಿದ ಮೇಲೆ ಈ ಥರದ್ದೊಂದು ಪ್ರೀ-ರಿಲೀಸ್ ವ್ಯಾಪಾರ ಶುರುವಾಗಲಿದೆ. ಆದರೆ, ಮಹೇಶ್ ಬಾಬು ಆ ವಿಚಾರದಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಇನ್ನು, ಹಿಂದಿ ಡಬ್ಬಿಂಗ್ ಹಕ್ಕು ಸೇರಿದಂತೆ ಒಂದಷ್ಟು ಹಕ್ಕುಗಳು ಮಾರಾಟವಾಗಿಲ್ಲವಂತೆ. ಅದರ ಹೊರತಾಗಿಯೇ 35 ಕೋಟಿ ರೂ.ಗಳನ್ನು ನಿರ್ಮಾಪಕರು ಜೇಬಿಗೆ ಇಳಿಸಿದ್ದಾರೆ ಎಂಬ ಮಾಹಿತಿ ಇದೆ. ಅಂದಹಾಗೆ, ಇದು ಮಹೇಶ್ ನಟಿಸಿದ ಸಿನಿಮಾಗಳಲ್ಲೇ ಸಿಕ್ಕ ಅತೀ ಹೆಚ್ಚಿನ ಮೊತ್ತವಾಗಿದೆಯಂತೆ!
'ಗೀತಾ ಗೋವಿಂದಂ' ನಿರ್ದೇಶಕರ ಸಿನಿಮಾ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಮೂಡಿಬಂದ ಯಶಸ್ವಿ ಸಿನಿಮಾ 'ಗೀತಾ ಗೋವಿಂದಂ'ಗೆ ನಿರ್ದೇಶನ ಮಾಡಿದ್ದ ಪರಶುರಾಮ್
'ಸರ್ಕಾರು ವಾರಿ ಪಾಟ' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 'ಅಲಾ ವೈಕುಂಠಪುರಮುಲೋ', 'ಯುವರತ್ನ' ಖ್ಯಾತಿಯ ಎಸ್. ಥಮನ್ ಈ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಛಾಯಾಗ್ರಹಣದ ಹೊಣೆ ಪಿ.ಎಸ್. ವಿನೋದ್ ಅವರದ್ದು. ವಿಶೇಷವೆಂದರೆ, ಇದರ ನಿರ್ಮಾಣವನ್ನು ಮಹೇಶ್ ಬಾಬು ಅವರ ಜಿಎಂಬಿ ಎಂಟರ್‌ಟೇನ್‌ಮೆಂಟ್, ಮೈತ್ರಿ ಮೂವೀ ಮೇಕರ್ಸ್, 14 ರೀಲ್ಸ್ ಪ್ಲಸ್ ಸಂಸ್ಥೆಗಳು ಜಂಟಿಯಾಗಿ ಮಾಡುತ್ತಿವೆ. 2021ರ ಬೇಸಿಗೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡುವ ಗುರಿಯನ್ನು ಚಿತ್ರತಂಡ ಇಟ್ಟುಕೊಂಡಿತ್ತು. ಆದರೆ, ಕೊರೊನಾದಿಂದ ಚಿತ್ರೀಕರಣ ತಡವಾಗಿದೆ. ಹಾಗಾಗಿ, 2021ರ ಅಕ್ಟೋಬರ್ ವೇಳೆಗೆ ಸಿನಿಮಾ ರಿಲೀಸ್ ಆಗಬಹುದು.ಕೀರ್ತಿ ಸುರೇಶ್
ನಾಯಕಿ
ಇನ್ನು, ಈ ಸಿನಿಮಾಕ್ಕೆ ನಾಯಕಿಯಾಗಿ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಬಣ್ಣ ಹಚ್ಚಲಿದ್ದಾರೆ.
ಮಹೇಶ್ ಬಾಬು ಜೊತೆ ಇದು ಅವರ ಮೊದಲ ಸಿನಿಮಾವಾಗಿದೆ. 'ಭರತ್ ಅನೇ ನೇನು' ಖ್ಯಾತಿಯ ಕಿಯಾರಾ ಅಡ್ವಾಣಿ ಮತ್ತೊಮ್ಮೆ ಈ ಸಿನಿಮಾ
ಮೂಲಕ 'ಪ್ರಿನ್ಸ್'ಗೆ ನಾಯಕಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದರೆ,
ಅಂತಿಮವಾಗಿ ಕೀರ್ತಿ ಆ
ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇನ್ನೋರ್ವ ನಾಯಕಿ ಕೂಡ ಇರಲಿದ್ದಾರಂತೆ.



ಕಾಮೆಂಟ್‌ಗಳಿಲ್ಲ